Sunday, March 06, 2011

ಕೃತಿ ಚೌರ್ಯ - ಸಂಶೋಧನೆ

ಒಂದೇ ಒಂದು ಸಾಲನ್ನ ಕದ್ದೆ
"ಕೃತಿ ಚೌರ್ಯ" ಅಂದ್ರು
ಎಲ್ಲರೊಳಗೊಂದೊಂದು ಸಾಲನ್ನ ಕದ್ದೆ
"ಸಂಶೋಧನೆ" ಅಂದ್ರು.

ಅವಳ ನೆನಪು ಅಮರ

ಅವಳೊಂದಿಗೆ ಕಳೆದ ಮಧುರ ನೆನಪುಗಳು
ಇಂದಿಗೂ ಮರೆಯದ ಕ್ಷಣಗಳು,
ಕಾರಣ ನಾನು ಅವಳಿಗಾಗಿ ಖರ್ಚುಮಾಡಿದ
ಕ್ರೆಡಿಟ್ ಕಾರ್ಡ್ ಇನ್ಸ್ಟಾಲ್ಮೆಂಟುಗಳು.

Thursday, July 08, 2010

ಸೋಲು, ಗೆಲುವು ಮತ್ತು ಬಿರಿಯಾನಿ


ವರ್ಲ್ಡ್ ಕಪ್ ನಲ್ಲಿ ಜರ್ಮನಿ ಗೆದ್ದರೆ
ಬಿಸಿ ಬಿಸಿ ಚಿಕನ್ ಬಿರಿಯಾನಿ.....

ಸೋತರೆ...,
ಸ್ಪೆಷಲ್ ಆಕ್ಟೋಪಸ್ ಬಿರಿಯಾನಿ...!!!!


(ಸುದ್ದಿ: ಜರ್ಮನಿಯ ಎಲ್ಲಾ ಪಂದ್ಯಗಳ ಭವಿಷ್ಯ ಕರಾರುವಾಕ್ಕಾಗಿ ಹೇಳಿ ಇಡೀ ವಿಶ್ವದ ಮನೆಮಾತಾಗಿದ್ದ ಪೌಲ್ ಎಂಬ ಹೆಸರಿನ ಆಕ್ಟೋಪಸ್, ಜರ್ಮನಿಗೆ ಸಕತ್ ಶಾಕ್ ನೀಡಿದೆ. ಬುಧವಾರ ನಡೆಯಲಿರುವ ಫೀಫಾ ವಿಶ್ವಕಪ್ 2010 ಸೆಮಿಫೈನಲ್ಸ್ ನಲ್ಲಿ ಸ್ಪೇನ್ ವಿರುದ್ಧ ಜರ್ಮನಿ ಸೋಲುವುದೆಂದು ಪೌಲ್ ಸೂಚಿಸಿದೆ.)

Friday, June 09, 2006

ನಾಯಕ-ಸೇವಕ

ನಾಟಕ,
ಪ್ರತಿಯೊಬ್ಬರ ಕಾಯಕ

ವೇದಿಕೆಯ ಮೇಲೆ ಅದು ಕೇವಲ ನಟನೆ
ನಿಜ ಜೀವನದಲ್ಲಿ ಅದೊಂದು ಸುಂದರ ಘಟನೆ

ವೇದಿಕೆಯ ಮೇಲೆ ನಾಯಕ
ಮನೆಯಲ್ಲಿ ಹೆಂಡತಿಯ ಸೇವಕ

ನಗು-ಮಗು

ನಾನೊಬ್ಬಳ ನೋಡಿದೆ ದೂರದಿಂದ
ಅವಳು ಕೈಬೀಸಿ ಕರೆದಳು ಮೆಲು ದನಿಯಿಂದ

ನಾ ತೊರಿದ್ದು ಕೇವಲ ಕಿರುನಗು
ಆದರೆ ಆಕೆ ತೋರಿದ್ದು ಅವಳ ಎರಡನೆಯ ಮಗು

Friday, January 20, 2006

ಓಲೆ-ಒಲೆ

ನನ್ನಂತರಂಗವ ಬಿಚ್ಚಿಟ್ಟಿತ್ತು
ಅವಳಿಗೆ ಬರೆದ ನನ್ನ ಓಲೆ

ಮರುದಿನ ಓಲೆಯೊಡನೆ ಅಣಕಿಸಿತ್ತಿತ್ತು

ಅವಳ ಮನೆಯ ಒಲೆ

ಅಂದ-ಮಂದ

ನಾನೊಬ್ಬಳ ನೋಡಿದೆ ದೂರದಿಂದ
ಅಂದ ತುಂಬಾ ಅಂದ

ಆದರೆ ಹತ್ತಿರಕ್ಕೆ ಹೋದಾಗ ತಿಳಿಯಿತು

ನನ್ನ ಕಣ್ಣು ಮಂದ